ಬೆಂಗಳೂರು: ನನ್ನ ನಾಮಪತ್ರ ತಿರಸ್ಕಾರ ಆಗಬೇಕೆಂಬ ಕಾರಣಕ್ಕೆ ಬಿಜೆಪಿ ಷಡ್ಯಂತ್ರ ಮಾಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದರು.
ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ. ಡಿ ಕೆ ಶಿವಕುಮಾರ್, ನನ್ನ ನಾಮಿನೇಷನ್ ಅತಿ ಹೆಚ್ಚು ಡೌನ್ಲೋಡ್ ಆಗಿದೆ. ಇದರ ಅರ್ಥ ನನ್ನ ನಾಮಿನೇಷನ್ ರಿಜೆಕ್ಟ್ ಆಗಬೇಕು ಎಂಬ ಉದ್ದೇಶವಿದೆ ಎಂದರು. ಬಿಜೆಪಿ, ಸಿಎಂ ಕಚೇರಿ ಮತ್ತು ಲಿಗಲ್ ಟೀಮ್ ಷಡ್ಯಂತ್ರ ಮಾಡಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ತಿರಸ್ಕಾರ ಮಾಡುವ ಪ್ರಯತ್ನ ನಡೀತಾ ಇದೆ. ಕಾಂಗ್ರೆಸ್ ಅಭ್ಯರ್ಥಿಗಳ ನಾಮಿನೇಷನ್ ಡೌನ್ಲೋಡ್ ಮಾಡಲಾಗಿದೆ. ಇದರ ಬಗ್ಗೆ ಚುನಾವಣಾ ಆಯೋಗ ಗಮನ ಹರಿಸಬೇಕು.