This is the title of the web page
This is the title of the web page

ಕುಟುಂಬ ರಾಜಕಾರಣಕ್ಕೆ ಜೋತು ಬಿದ್ದ ಬಿಜೆಪಿ ರಾಷ್ಟ್ರೀಯ ಪಕ್ಷ

ಕುಟುಂಬ ರಾಜಕಾರಣಕ್ಕೆ ಜೋತು ಬಿದ್ದ ಬಿಜೆಪಿ ರಾಷ್ಟ್ರೀಯ ಪಕ್ಷ

 

ಬಿಜೆಪಿಯಿಂದ  ತಂದೆ-ಮಗ ಇದ್ದಾರೆ. ಸಹೋದರರಿಗೆ ಹಾಗೂ ಒಂದು ಕುಟುಂಬದ ಸಂಬಂಧಿಕರಿಗೆ ಮಣೆ ಹಾಕಿದ ಬಿಜೆಪಿ

ಬಿಜೆಪಿಯಿಂದ ಜಾರಕಿಹೊಳಿ ಸಹೋದರರಾದ ರಮೇಶ್ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ

ದಿವಂಗತ ಉಮೇಶ್ ಕತ್ತಿಯವರ ಪುತ್ರ ನಿಖಿಲ್ ಕತ್ತಿ ಮತ್ತು ಅವರ ಸಹೋದರ ರಮೇಶ್ ಕತ್ತಿ

ನಿಪ್ಪಾಣಿ ಶಾಸಕಿ ಹಾಲಿ ಬಿಜೆಪಿ ಸಚಿವೆ ಶಶಿಕಲಾ ಜೊಲ್ಲೆ ಅವರ ಪತಿಯಾದ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ

ಕಲಬುರಗಿ ಸಂಸದ ಉಮೇಶ ಜಾಧವ್ ಅವರ ಪುತ್ರ ಅವಿನಾಶ್ ಜಾಧವ್

ತುಮಕೂರು ಸಂಸದ ಜಿ.ಎಸ್.ಬಸವರಾಜ್ ಪುತ್ರ ಜ್ಯೋತಿ ಗಣೇಶ್ ಗೆ ತುಮಕೂರು ನಗರದ ಟಕೆಟ್

ಬಿಜೆಪಿ ಪರಿವಾರಕ್ಕೆ ಮಣೆ ಹಾಕಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

 

ಬೆಂಗಳೂರು, ಏ 14: ರಾಜಕಾರಣದ ಹಿನ್ನೆಲೆ ಉಳ್ಳವರೇ ಆಗಿದ್ದಾರೆ. ಈವರೆಗೆ ಬಿಜೆಪಿ ಘೋಷಿಸಿದ 212 ಅಭ್ಯರ್ಥಿಗಳ ಪೈಕಿ 34 ಅಭ್ಯರ್ಥಿಗಳು ಸ್ವಜನಪಕ್ಷಪಾತದಿಂದಾಗಿಯೇ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ದ್ದಾರೆ ಎಂದು ಎಂದು ಎಐಸಿಸಿ ವಕ್ತಾರ ಗೌರವ್ ವಲ್ಲಭ್ ಲೇವಡಿ ಮಾಡಿದ್ದಾರೆ.

ಬಿಜೆಪಿ ನಾಯಕರು ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬವನ್ನು ಗುರಿಯಾಗಿಸಲು ಕುಟುಂಬ ರಾಜಕರಾಣವನ್ನು ಸದಾ ಅಸ್ತ್ರವಾಗಿ ಬಳಸುತ್ತಿದ್ದರು. ಹೀಗೆ ಬಿಜೆಪಿಯಿಂದ, ಪ್ರಧಾನಿ ನರೇಂದ್ರ ಮೋದಿಯವರಿಂದ ಉಂಟಾಗುತ್ತಿದ್ದ ಟೀಕೆ, ತಿರಸ್ಕಾರಕ್ಕೆ ಪ್ರತಿಯಾಗಿ ಕಾಂಗ್ರೆಸ್ ನಾಯಕರು ಬಿಜೆಪಿಯ ಕುಟುಂಬ ಸಂಬಂಧಗಳ ಪಟ್ಟಿ ಸಿದ್ಧಪಡಿಸಿದೆ.

ಡಬಲ್ ಇಂಜಿನ್ ಬಿಜೆಪಿ ಸರ್ಕಾರವು ಸದಾ ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಕುಟುಂಬ ರಾಜಕಾರಣವನ್ನು ದ್ವೇಷಿಸುತ್ತಲೇ ಬಂದಿತ್ತು. ಆದರೆ ಕುಟುಂಬ ರಾಜಕಾರಣ ದ್ವೇಷಿ ಎಂಬ ಬಿಜೆಪಿ ನಿಲುವು ತಾನು ಘೋಷಿಸಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ಮಾಯವಾಗಿದೆ

ವಿ.ಸೋಮಣ್ಣಗೋವಿಂದರಾಜನಗರದಲ್ಲಿ ಸೋಲುತ್ತೇನೆ ಅಂತಾ ಚಾಮರಾಜನಗರಕ್ಕೆ ಬಂದಿಲ್ಲ, ಆ ಕೆಲಸವನ್ನು ನನ್ನ ಎಕ್ಡನೂ ಮಾಡಲ್ಲ: ವಿ.ಸೋಮಣ್ಣ
ಚುನಾವಣಾ ಕಣಕ್ಕಿಳಿಯಲು ತಮಗೆ ಟಿಕೆಟ್ ಸುಮಾರು 10 ಕುಟುಂಬಗಳು ಬಂದಿದ್ದವು.

ಅದರಲ್ಲಿ ಕಡಿಮೆ ಎಂದರೂ ಎರಡು ಡಜನ್‌ ಅಭ್ಯರ್ಥಿಗಳಿಗೆ ಕುಟುಂಬ ರಾಜಕಾರಣ ಧ್ವೇಷಿಸುವ ಬಿಜೆಪಿಯಿಂದ ಟಿಕೆಟ್ ಸಿಕ್ಕಿವೆ. ಅದರ ತಂದೆ-ಮಗ ಇದ್ದಾರೆ. ಸಹೋದರರಿಗೆ ಹಾಗೂ ಒಂದು ಕುಟುಂಬದ ಸಂಬಂಧಿಕರಿಗೆ ಟಿಕೆಟ್ ಧಕ್ಕಿದ್ದು, ಅವರೆಲ್ಲ ಪ್ರಚಾರ ಆರಂಭಿಸಿದ್ದಾರೆ.

ಬಿಜೆಪಿಯಿಂದ ಜಾರಕಿಹೊಳಿ ಸಹೋದರರಾದ ರಮೇಶ್ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಅವರಿಗೆ ಅವರಿಗೆ ಬಿಜೆಪಿ ಟಿಕೆಟ್ ಒದಗಿಸಿದೆ. ಇನ್ನೂ ದಿವಂಗತ ಸಚಿವ ಉಮೇಶ ಕತ್ತಿ ಅವರ ಕುಟುಂಬಕ್ಕೂ ಎರಡು ಟಿಕೆಟ್‌ಗಳು ಲಭಿಸಿವೆ. ಉಮೇಶ್ ಕತ್ತಿಯವರ ಪುತ್ರ ನಿಖಿಲ್ ಕತ್ತಿ ಮತ್ತು ಅವರ ಸಹೋದರ ರಮೇಶ್ ಕತ್ತಿ ಸ್ಪರ್ಧೆಗೆ ಸಜ್ಜಾಗಿದ್ದಾರೆ.

ನಿಪ್ಪಾಣಿ ಶಾಸಕಿ ಹಾಲಿ ಬಿಜೆಪಿ ಸಚಿವೆ ಶಶಿಕಲಾ ಜೊಲ್ಲೆ ಅವರ ಪತಿಯಾದ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ಈ ಬಾರಿಯು ಬಿಜೆಪಿಯ ಅಭ್ಯರ್ಥಿಗಳಾಗಿ ಸ್ಪರ್ಧಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಕಲ್ಯಾಣ ಕರ್ನಾಟಕದ ಕಲಬುರಗಿ ಸಂಸದ ಉಮೇಶ ಜಾಧವ್ ಅವರ ಪುತ್ರ ಅವಿನಾಶ್ ಜಾಧವ್ ಅವರು ಚಿಂಚೋಳಿ ಕಣದಿಂದ ಸ್ಪರ್ಧೆಗೆ ಇಳಿದಿದ್ದಾರೆ. ತುಮಕೂರು ಸಂಸದ ಜಿ.ಎಸ್.ಬಸವರಾಜ್ ಪುತ್ರ ಜ್ಯೋತಿ ಗಣೇಶ್ ಗೆ ತುಮಕೂರು ನಗರದ ಟಕೆಟ್ ಲಭಿಸಿದೆ.

ಕಾಂಗ್ರೆಸ್ ನಾಯಕರು ಬಿಜೆಪಿಯ ಕುಟುಂಬ ಸಂಬಂಧಗಳ ಪಟ್ಟಿ ಸಿದ್ಧಪಡಿಸಿದೆ.ಅದಕ್ಕೆ ವ್ಯಾಪಕ ಪ್ರಚಾರ ನೀಡುತ್ತಿದೆ. ಮೇ 10ರಂದು ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯ ಸಂದರ್ಭದಲ್ಲಿ ಬಿಜೆಪಿ ಪರಿವಾರಕ್ಕೆ ಮಣೆ ಹಾಕಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.ಬಿಜೆಪಿಯಲ್ಲಿ ಸಹ ಹಾಲಿ ಮತ್ತು ಮಾಜಿ ನಾಯಕರ ಮಕ್ಕಳಿಗೇ ಸಹೋದರರಿಗೇ ಟಿಕೆಟ್ ನೀಡಿರುವ ನಿದರ್ಶನಗಳನ್ನು ಕಾಣಬಹುದಾಗಿದೆ.