This is the title of the web page
This is the title of the web page

ವಿಧಾನ ಪರಿಷತ್ ನಲ್ಲಿ ಬಹುಮತ ಕಳೆದುಕೊಂಡ ಬಿಜೆಪಿ..?

ವಿಧಾನ ಪರಿಷತ್ ನಲ್ಲಿ ಬಹುಮತ ಕಳೆದುಕೊಂಡ ಬಿಜೆಪಿ..?

 

ರಾಜ್ಯ ವಿಧಾನಸಭೆ ಚುನಾವಣೆಗೂ ಮುನ್ನವೇ ಮೇಲ್ಮನೆಯಲ್ಲಿ  ಬಹುಮತ ಕಳೆದುಕೊಂಡ ಬಿಜೆಪಿ.

ಪರಿಷತ್ ನಲ್ಲಿ ಮ್ಯಾಜಿಕ್ ನಂಬರ್‌ 38 ಸಂಖ್ಯೆ ಇರಬೇಕು

ವಿಧಾನ ಪರಿಷತ್‌ನಲ್ಲಿ  ಈಗ ಬಿಜೆಪಿ ಸಂಖ್ಯೆ 36ಕ್ಕೆ ಕುಸಿದಿದೆ.

ಬೆಂಗಳೂರು:  ಬಿಜೆಪಿ ಸದಸ್ಯರ ಬಲ 39 ಆಗಿತ್ತು. ಎಂಎಲ್‌ಸಿಗಳಾದ ಪುಟ್ಟಣ್ಣ ಮತ್ತು ಬಾಬು ರಾವ್ ಚಿಂಚನಸೂರ್ ಮಾರ್ಚ್‌ನಲ್ಲಿ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದರು. ತಾಂತ್ರಿಕವಾಗಿ ಚಿಂಚನಸೂರ್ ರಾಜೀನಾಮೆ ಸಲ್ಲಿಸಿದಾಗ ಬಿಜೆಪಿ ಬಹುಮತ ಕಳೆದುಕೊಂಡಿತ್ತು. ಪರಿಷತ್ ನಲ್ಲಿ ಮ್ಯಾಜಿಕ್ ನಂಬರ್‌ 38 ಆಗಿದೆ, ಅದರಂತೆ ಬಿಜೆಪಿ ಬಹುಮತ ಕಳೆದುಕೊಂಡಿದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ  ತಿಳಿಸಿದ್ದಾರೆ.

ರಾಜ್ಯ ವಿಧಾನಸಭೆ ಚುನಾವಣೆಗೂ ಮುನ್ನವೇ ಮೇಲ್ಮನೆಯಲ್ಲಿ ಬಿಜೆಪಿ ಬಹುಮತ ಕಳೆದುಕೊಂಡಿದೆ. ಬುಧವಾರ ಎಂಎಲ್‌ಸಿ ಸ್ಥಾನಕ್ಕೆ ಆರ್‌ ಶಂಕರ್‌ ರಾಜೀನಾಮೆ ನೀಡುವುದರೊಂದಿಗೆ 75 ಸದಸ್ಯರ ಪರಿಷತ್‌ನಲ್ಲಿ ಬಿಜೆಪಿ ಸಂಖ್ಯೆ 36ಕ್ಕೆ ಕುಸಿದಿದೆ.

ಅಥಣಿ ಟಿಕೆಟ್ ಸಿಗದೆ ಅಸಮಾಧಾನಗೊಂಡಿರುವ ಬಿಜೆಪಿ ಎಂಎಲ್‌ಸಿ ಮತ್ತು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರು ಬಿಜೆಪಿ ತೊರೆದು ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರಿಂದ ಸಂಖ್ಯೆ 35ಕ್ಕೆ ಇಳಿಯುವ ಸಾಧ್ಯತೆಯಿದೆ. ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಬಿಜೆಪಿಯ 224 ಅಭ್ಯರ್ಥಿಗಳ ಪಟ್ಟಿಯು ಪೂರ್ಣ ಪ್ರಮಾಣದಲ್ಲಿ ಬಿಡುಗಡೆಯಾಗಬೇಕಿದ್ದು, ಮೂರನೇ ಪಟ್ಟಿ ಹೊರ ಬಿದ್ದ ನಂತರ, ಮೇಲ್ಮನೆಯಲ್ಲಿ ಪಕ್ಷದ ಬಲ ಮತ್ತಷ್ಟು ಕಡಿಮೆಯಾಗಬಹುದು.