ಬೆಂಗಳೂರು: ಕನಕಪುರ ಮತ್ತು ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಬಿ ಎಲ್ ಸಂತೋಷ್ ಹಾಗೂ ಪ್ರಲ್ಹಾದ್ ಜೋಶಿ ಅವರನ್ನು ಸ್ಪರ್ಧೆಗೆ ಇಳಿಸಿ ಎಂದು ಪಂಥಾಹ್ವಾನ ನೀಡಿದ್ದು , ಆಹ್ವಾನ ಸ್ವೀಕರಿಸುವರೇ? ಎಂದು ಕಾಂಗ್ರೆಸ್ ಸವಾಲೆಸಿದಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, “ನಾಗಪುರದ ವಂಶದವರು ಇತರರನ್ನು ಹೊಂಡಕ್ಕೆ ತಳ್ಳಿ ಆಳ ನೋಡುವ ಬದಲು ತಾವೇ ಮುಂದೆ ನಿಂತು ಸಾಮರ್ಥ್ಯ ತೋರಲಿ. ಬಿ ಎಲ್ ಸಂತೋಷ್ ತೆರೆಮರೆಯಿಂದ ಹೊರಬಂದು ಚುನಾವಣೆಗೆ ಸ್ಪರ್ಧಿಸಿ ಸಾಮರ್ಥ್ಯ ನಿರೂಪಿಸಲಿ” ಪಂಥಾಹ್ವಾನ ನೀಡಿದೆ.
ಕಾಂಗ್ರೆಸ್ ಪಂಥಾಹ್ವಾನ : “ಆರ್. ಅಶೋಕ್ ಅವರಿಗೆ ಎರಡು ಟಿಕೆಟ್, ಎನ್.ಆರ್ ರಮೇಶ್‌ಗೆ ಒಂದೂ ಟಿಕೆಟ್ ಇಲ್ಲ. ಬಿಜೆಪಿಯ ಪ್ರಯೋಗವು ಆರ್. ಅಶೋಕ್‌ರವರಿಗೆ “ಖೆಡ್ಡಾ”ವಾಗಿ ಪರಿಣಮಿಸಲಿದೆ. ಪದ್ಮನಾಭನಗರದಲ್ಲಿ ಬಂಡಾಯವೆದ್ದ ಎನ್.ಆರ್ ರಮೇಶ್ ಬಿಜೆಪಿಗೇ ಮುಳುವಾಗುವುದು ನಿಶ್ಚಿತ. ಬಿಜೆಪಿಯೊಳಗಿನ ಕಿತ್ತಾಟ ಅಶೋಕರನ್ನು ಬಲಿಪಶು ಮಾಡಲಿದೆ” ಎಂದು ಕಾಂಗ್ರೆಸ್ ಟೀಕಿಸಿದೆ.
“ಬಿಜೆಪಿ ಈಗ ಏಕಕಾಲಕ್ಕೆ ಎಲ್ಲವನ್ನೂ ಎದುರಿಸುತ್ತಿದೆ. ಕಣ್ಣೀರು ಪರ್ವ, ಬಂಡಾಯ ಪರ್ವ, ನಿವೃತ್ತಿ ಪರ್ವ, ಆಕ್ರೋಶ ಪರ್ವ, ರಾಜೀನಾಮೆ ಪರ್ವ! ಇಷ್ಟು ದಿನ ಒಳಗೊಳಗೇ ಕುದಿಯುತ್ತಿದ್ದ ಬಿಜೆಪಿಯೊಳಗಿನ ಕಿತ್ತಾಟ ಈ ಚುನಾವಣೆಯಲ್ಲಿ ಜ್ವಾಲಾಮುಖಿಯಾಗಿ ಸ್ಪೋಟಿಸುವುದು ನಿಶ್ಚಿತ. “ನಂಬಿಸಿ ಕತ್ತು ಕುಯ್ಯುವುದು” ಎಂಬ ಮಾತಿಗೆ ಬಿಜೆಪಿಯೇ ಬ್ರಾಂಡ್ ಅಂಬಾಸಿಡರ್” ಎಂದು ಕುಟುಕಿದೆ.