This is the title of the web page
This is the title of the web page

ಮುಖ್ಯಮಂತ್ರಿ ಬೊಮ್ಮಾಯಿ ವಿರುದ್ಧ ಏಕವಚನದಲ್ಲಿ ಶಾಸಕ ನೆಹರು ಓಲೇಕಾರ್ ವಾಗ್ದಾಳಿ

ಮುಖ್ಯಮಂತ್ರಿ ಬೊಮ್ಮಾಯಿ ವಿರುದ್ಧ ಏಕವಚನದಲ್ಲಿ ಶಾಸಕ ನೆಹರು ಓಲೇಕಾರ್ ವಾಗ್ದಾಳಿ

 

ಬಸವರಾಜ್ ಬೊಮ್ಮಾಯಿ ,’15000 ಕೋಟಿ ಹನಿ ನೀರಾವರಿ ಹಣವನ್ನು ಕೊಳ್ಳೆ ಹೊಡೆದಿದ್ದರೆ  ಓಲೇಕಾರ್ ಹೇಳಿಕೆ

 

ಹಾವೇರಿ ಏ 13: ಕಳೆದ ಎರಡು ದಿನಗಳಿಂದ ಬಿಜೆಪಿ ತನ್ನ ಮೊದಲ ಹಾಗೂ ಎರಡನೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಿಜೆಪಿಯಲ್ಲಿ ಮೂಲ ಹಾಗೂ ವಲಸೆ ಬಿಜೆಪಿಗರ ಪೈಪೋಟಿ ಹೆಚ್ಚಾಗಿದ್ದು ಟಿಕೆಟ್ ಬಡಿದಾಟ ಶುರುವಾಗಿದೆ. ಟಿಕೆಟ್ ಕೈತಪ್ಪಿದ್ದಕ್ಕೆ ಹಲವಾರು ಬಿಜೆಪಿ ಶಾಸಕರು ಬಹಿರಂಗವಾಗಿ ಅಸಮಧಾನವನ್ನು ಹೊರಹಾಕಿದ್ದಾರೆ.

ಮೂಲ ಬಿಜೆಪಿ ನಾಯಕರು ಟಿಕೆಟ್ ಕೈತಪ್ಪಿದ್ದಕ್ಕೆ ಕೆಂಡಾಮಂಡಲವಾಗಿದ್ದಾರೆ. ರಾಜ್ಯ ಮುಖ್ಯಮಂತ್ರಿ ವಿರುದ್ಧ ಏಕವಚನದಲ್ಲಿ ಶಾಸಕ ನೆಹರು ಓಲೇಕಾರ್ ವಾಗ್ದಾಳಿ ಮಾಡಿದ್ದಾರೆ. ಪಕ್ಷದವರೇ ಬಹಿರಂಗವಾಗಿ ಹಲವಾರು ಆರೋಪಗಳನ್ನು ಮಾಡಿದ್ದಾರೆ. ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ನೆಹರು ಓಲೇಕಾರ್, ‘ನನಗೆ ಟಿಕೆಟ್ ಕೈ ತಪ್ಪುವುದಕ್ಕೆ ಬೊಮ್ಮಾಯಿ ಅವರೇ ಕಾರಣ’ ಎಂದಿದ್ದಾರೆ.

‘ಧಮ್ ಇದ್ದರೆ ಬೊಮ್ಮಾಯಿ ತೋರಿಸಲಿ, ನಮ್ಮ ತಾಕತ್ತು ಎಷ್ಟು ಇದೆ ಅಂತ ನಾವು ತೋರಿಸುತ್ತೇವೆ. ಅವರೂ ಅವರ ತಾಕತ್ತು ತೋರಿಸಲಿ. ಬೊಮ್ಮಾಯಿ ಸಾಕಷ್ಟು ಕಳಪೆ ಕೆಲಸ ಮಾಡಿದ್ದಾರೆ. 15000ಕೋಟಿ ಹನಿ ನೀರಾವರಿ ಹಣವನ್ನು ಕೊಳ್ಳೆ ಹೊಡೆದಿದ್ದಾರೆ. ಇದೆಲ್ಲವೂ ಬಯಲಾಗಲಿದೆ’ ಎಂದು ಹಾವೇರಿಯಲ್ಲಿ ಶಾಸಕ ನೆಹರು ಓಲೇಕಾರ್ ಆಕ್ರೋಶಗೊಂಡಿದ್ದಾರೆ

ಓಲೇಕಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬಸವರಾಜ್ ಬೊಮ್ಮಾಯಿ ಅವರು,’15000ಕೋಟಿ ಹನಿ ನೀರಾವರಿ ಹಣವನ್ನು ಕೊಳ್ಳೆ ಹೊಡೆದಿದ್ದರೆ. ಅದರ ದಾಖಲೆ ತೋರಿಸಲಿ. ದಾಖಲೆ ಸಮೇತ ಆರೋಪ ಮಾಡಲಿ,ಆರೋಪ ದಾಖಲೆ ಸಮೇತ ಮಾಡಲಿ’ ಎಂದು ಸವಾಲು ಹಾಕಿದ್ದಾರೆ.