ಶೀಘ್ರವೇ ಬಿಜೆಪಿ 3 ನೇ ಪಟ್ಟಿ ಪ್ರಕಟ: ಅರುಣ್ ಸಿಂಗ್ ಮಹತ್ವದ ಮಾಹಿತಿ

ಶೀಘ್ರವೇ ಬಿಜೆಪಿ 3 ನೇ ಪಟ್ಟಿ ಪ್ರಕಟ: ಅರುಣ್ ಸಿಂಗ್ ಮಹತ್ವದ ಮಾಹಿತಿ

 

ಇನ್ನೂಳಿದ ಹಾಲಿ ಶಾಸಕರಿಗೆ ನಡುಕ ಶುರು

ಬೆಂಗಳೂರು : ಶೀಘ್ರವೇ ಬಿಜೆಪಿ ಅಭ್ಯರ್ಥಿಗಳ 3 ನೇ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮಾಹಿತಿ ಹಿನ್ನೆಲೆ , ಇನ್ನೂಳಿದ ಹಾಲಿ ಶಾಸಕರಿಗೆ ನಡುಕ ಶುರುವಾಗಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿಗಳ 3 ನೇ ಪಟ್ಟಿ ಶೀಘ್ರವೇ ಬಿಡುಗಡೆಯಾಗಲಿದೆ. ಆದರೆ, ಈಗಾಗಲೇ 14 ಹಾಲಿ ಶಾಕಸರಿಗೆ ಟಿಕೆಟ್‌ ಕೈ ತಪ್ಪಿದ ಹಿನ್ನೆಲೆಯಲ್ಲಿ ಬಂಡಾಯದ ಬಾವುಟ ಹಾರಿಸುತ್ತಿದ್ದಾರೆ. 3 ನೇ ಪಟ್ಟಿಯಲ್ಲಿ ಯಾವ ಶಾಸಕರಿಗೆ ಶಾಕ್‌ ಕಾದಿದೆ ಎಂಬುವುದು ರೋಚಕ.

ಯಾರಿಗೆ ಬಿಜೆಪಿ ಟಿಕೆಟ್ ಸಿಗಲಿಲ್ಲ ಎಂದು ಕೆಲವರ ಮನಸ್ಸಿಗೆ ನೋವಾಗಿರುವುದು ನಿಜ. ಅಸಮಾಧಾನಗೊಂಡ ನಾಯಕರ ಮನವೊಲಿಕೆ ಮಾಡುತ್ತೇವೆ. ಬಿಜೆಪಿ ವಿಚಾರದಿಂದ ಅವರು ದೂರ ಉಳಿಯಲು ಸಾಧ್ಯವಿಲ್ಲ ಎಂದುರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ.