This is the title of the web page
This is the title of the web page

ಲಿಂಗಾಯತ ಪ್ರಭಾವಿ ನಾಯಕ ಲಕ್ಷ್ಮಣ ಸವದಿ…. ಕೈ ಯತ್ತ ಹೆಜ್ಜೆ.?

ಲಿಂಗಾಯತ ಪ್ರಭಾವಿ ನಾಯಕ ಲಕ್ಷ್ಮಣ ಸವದಿ…. ಕೈ ಯತ್ತ ಹೆಜ್ಜೆ.?

 

ಏನು ಹೊಸ ವರಸೆ, ಬಿಜೆಪಿಯಲ್ಲಿ ಟಿಕೆಟ್‌ ತಪ್ಪಿದರೆ ಕಾಂಗ್ರೆಸ್‌ನಿಂದ ಕಣಕ್ಕೆ

ಸೋನಿಯಾ, ರಾಹುಲ್ ಸಮ್ಮುಖದಲ್ಲೇ ಲಕ್ಷ್ಮಣ ಸವದಿ ಅವರನ್ನು ಪಕ್ಷ ಸೇರ್ಪಡಗೆ ಮಾಸ್ಟರ್‌ ಪ್ಲ್ಯಾನ್‌

ಸುರ್ವಣಲೋಕ ದಿನಪತ್ರಿಕೆಯಲ್ಲಿ ಅಥಣಿ ಕ್ಷೇತ್ರ ಚಿತ್ರಣ , ನಾನಾ…ನೀನಾ…

ಬೆಳಗಾವಿ : ಬೆಳಗಾವಿ ಭಾಗದ ಲಿಂಗಾಯತ ಪ್ರಭಾವಿ ನಾಯಕ ಲಕ್ಷ್ಮಣ ಸವದಿ ನಡೆ ನಿಗೂಡವಾಗಿದ್ದು, ತವರೂ ಪಕ್ಷವಾದ ಬಿಜೆಪಿಯಲ್ಲಿ ಟಿಕೆಟ್‌ ಪಡೆದುಕೊಳ್ಳುವಲ್ಲಿ ಹಿನ್ನಡೆಯಾದರೆ.

ಬಿಜೆಪಿಯ ಕಟ್ಟಾಳು ಲಕ್ಷಣ್ ಸವದಿಗೆ ಕಾಂಗ್ರೆಸ್ ಸೇರುವ ಲಕ್ಷಣಗಳಿಗೆ. ಈಗಾಗಲೇ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಜತೆ ಲಕ್ಷ್ಮಣ ಸವದಿ ಕಾಂಗ್ರೆಸ್‌ ಸೇರುವ ಕುರಿತು ಒಂದು ಸುತ್ತಿನ ಮಾತುಕತೆಯಾಗಿದ್ದು ಚರ್ಚೆ ನಡೆದಿವೆ.

ಏನು ಹೊಸ ವರಸೆ: ಅಥಣಿ ಕ್ಷೇತ್ರದಿಂದ ಯಾರನ್ನು ಕಣಕ್ಕಿಳಿಸಬೇಕು ಎಂದು ಬಿಜೆಪಿ ವರಿಷ್ಠರಿಗೆ ತಲೆ ನೋವಾಗಿದ್ದು, ಲಕ್ಷ್ಮಸವದಿಗೆ ಬಿಜೆಪಿಯಲ್ಲಿ ಟಿಕೆಟ್‌ ಕೈ ತಪ್ಪಿದರೆ ಕಾಂಗ್ರೆಸ್‌ ನಿಂದ ತೊಡೆತಟ್ಟಲಿದ್ದಾರೆ. ರಾಜ್ಯರಾಜಕಾರಣಲ್ಲಿ ಸವದಿ ಹೊಸ ವರಸೆ ಆರಂಭಿಸಿದ್ದು, ಲಕ್ಷ್ಮಣ ಸವದಿ ಕಾಂಗ್ರೆಸ್‌ ಗೆ ಹಜ್ಜೆ ಇಟ್ಟರೆ, ಬಿಜೆಪಿಗೆ ಒಂದಿಷ್ಟು ಹಿನ್ನಡೆಯಾಗುವ ಸಾಧ್ಯತೆ ಇದೆ.

ತಮ್ಮ ಆಪ್ತ ಮಹೇಶ್ ಕುಮಟಳ್ಳಿಗೆ ಟಿಕೆಟ್ ಕೊಡಿಸಲು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪಟ್ಟು ಹಿಡಿದಿದ್ದು, ಲಕ್ಷ್ಮಣ ಸವದಿ ಕೂಡ ಟಿಕೆಟ್ ಗಾಗಿ ಒತ್ತಡ ಹೇರುತ್ತಿದ್ದಾರೆ. ಇದರ ಮಧ್ಯೆ ಮಹೇಶ್ ಕುಮಟಳ್ಳಿಯವರಿಗೇ ಬಿಜೆಪಿ ಟಿಕೆಟ್ ಸಿಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಲಕ್ಷ್ಮಣ ಸವದಿ ಅವರನ್ನು ಕಾಂಗ್ರೆಸ್​ನ ಪ್ರಮುಖ ನಾಯಕರು ಸಂಪರ್ಕ ಮಾಡಿದ್ದು, ಪಕ್ಷಕ್ಕೆ ಸೆಳೆಯಲು ನಿರಂತರ ಕಸರತ್ತು ನಡೆಸಿದ್ದಾರೆ. ಈಗಾಗಲೇ ಸವದಿ ಸಹ ಕೊಪ್ಪಳ ಕಾಂಗ್ರೆಸ್​ ಶಾಸಕರೊಬ್ಬ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಸೋನಿಯಾ, ರಾಹುಲ್ ಸಮ್ಮುಖದಲ್ಲೇ ಲಕ್ಷ್ಮಣ ಸವದಿ ಅವರನ್ನು ಪಕ್ಷ ಸೇರ್ಪಡೆ ಮಾಡಿಕೊಳ್ಳಲು ರಾಜ್ಯ ಕಾಂಗ್ರೆಸ್​ ನಾಯಕರು ಪ್ಲಾನ್​ ಮಾಡಿದ್ದಾರೆ. ಬಿಜೆಪಿ ಸರ್ಕಾರ ರಚನೆಗೆ ಪ್ರಮುಖ ಪಾತ್ರ ವಹಿಸಿದ ವಲಸಿಗ ಶಾಸಕರು ಹಾಗೂ ಮೂಲ ಬಿಜೆಪಿಗರ ನಡುವಿನ ತಿಕ್ಕಾಟ ಬಿಜೆಪಿ ಪಕ್ಷದಲ್ಲಿ ಟಿಕೆಟ್ ಘೋಷಣೆಗೂ ಮುನ್ನವೇ ಭುಗಿಲೆದ್ದಿದೆ. ಬೆಳಗಾವಿ ಜಿಲ್ಲೆಯ ಅಥಣಿ ಕ್ಷೇತ್ರದಲ್ಲಿ ವಲಸಿಗ ಶಾಸಕ ಮಹೇಶ್ ಕುಮಟಳ್ಳಿ ಅವರಿಗೆ ಟಿಕೆಟ್ ನೀಡಬೇಡಿ ನನಗೆ ನೀಡಬೇಕು ಎಂದು ಬಿಜೆಪಿಯ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಹಠಕ್ಕೆ ಬಿದ್ದಿದ್ದಾರೆ.

ಕ್ಷೇತ್ರದಲ್ಲಿ ಲಿಂಗಾಯತರ ಸಂಖ್ಯೆ ಹೆಚ್ಚಿದೆ. ಜೈನರು, ಕುರುಬರು, ಮಸ್ಲೀಮರು ನಿರ್ಣಾಯಕ ಸ್ಥಾನದಲ್ಲಿದ್ದಾರೆ. ಪ್ರಬಲ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಸೇರಿದ ಅಭ್ಯರ್ಥಿ ಮಹೇಶ ಕುಮಟಳ್ಳಿ ಎದುರು ಗಾಣಿಗ ಸಮಾಜದ ಲಕ್ಷ್ಮಣ ಸವದಿ ಜಾತಿ ಬಲ ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ಪಂಚಮಸಾಲಿ ಸಮಾಜದ ಮಹೇಶ್ ಕುಮಟಳ್ಳಿ ಅವರ ವೋಟ್ ಬ್ಯಾಂಕ್ ಮೇಲೆ ಸವದಿ ಕಣ್ಣಿಟ್ಟು ಪಂಚಮಸಾಲಿ ಮುಖಂಡರನ್ನು ಸೆಳೆಯಲು ಮುಂದಾಗಿದ್ದಾರೆ. ಒಂದು ಕಡೆ ಮಹೇಶ್ ಕುಮಟಳ್ಳಿ ಅವರಿಗೆ ಅಥಣಿ ಟಿಕೆಟ್ ನೀಡದಿದ್ದರೆ ನಾನು ರಾಜಕೀಯ ನಿವೃತ್ತಿ ಪಡೆದುಕೊಳ್ಳುತ್ತೇನೆ ಎಂದು ಸವಾಲನ್ನು ಗೋಕಾಕ್ ಸಾಹುಕಾರ ಕುಮಟಳ್ಳಿ ಪರ ಬ್ಯಾಟ್ ಬೀಸಿದರೆ ಮತ್ತೊಂದೆಡೆ ಬಿಜೆಪಿ ಟಿಕೆಟ್ ನನಗೆ ನಾಮಪತ್ರ ಸಲ್ಲಿಕೆಗೆ ಬರುವಂತೆ ಕಾರ್ಯಕರ್ತರಿಗೆ ಸವದಿ ಕರೆ ಕೊಡುತ್ತಿದ್ದಾರೆ.

ಮಹೇಶ್​ ಕುಮಟಳ್ಳಿಗೆ ಬಿಟ್ಟು ಲಕ್ಷ್ಮಣ ಸವದಿ ಅವರಿಗೆ ಅಥಣಿ ಟಿಕೆಟ್​ ನೀಡಬೇಕೆಂದು. ಯಾರನ್ನು ಕಣಕ್ಕೆ ಇಳಿಸಬೇಕು ಎಂದು ಹೈಕಮಾಂಡ್‌ ಗೆ ಚಿಂತನೆ ಶುರುವಾಗಿದೆ. ಯಾರಿಗೂ ಕೊಟ್ಟರು ಅಥಣಿಯಲ್ಲಿ ಬಿನ್ನಮತ ಸ್ಪೋಟ್‌ ಗೊಳಲಿದೆ ಎಂದು ಸುರ್ವಣಲೋಕ ದಿನಪತ್ರಿಕೆ ಮಾಹಿತಿ ತಿಳಿದು ಬಂದಿದೆ.