This is the title of the web page
This is the title of the web page

ಹುನ್ನೂರ ಚೆಕ್‌ಪೋಸ್ಟನಲ್ಲಿ ದಾಖಲೆ ಇಲ್ಲದ 2.10 ಕೋಟಿ ರೂ. ಜಪ್ತಿ

ಹುನ್ನೂರ ಚೆಕ್‌ಪೋಸ್ಟನಲ್ಲಿ ದಾಖಲೆ ಇಲ್ಲದ 2.10 ಕೋಟಿ ರೂ. ಜಪ್ತಿ

ಬಾಗಲಕೋಟೆ: ಏಪ್ರೀಲ್ 10 ಜಮಖಂಡಿ ಮತಕ್ಷೇತ್ರ ವ್ಯಾಪ್ತಿಯಲ್ಲಿ ಸ್ಥಾಪಿಸಲಾದ ಹುನ್ನೂರ ಚೆಕ್‌ಪೋಸ್ಟ್ನಲ್ಲಿ ಸಂಶಯಾಸ್ಪದವಾದ ಹಾಗೂ ದಾಖಲೆ ಇಲ್ಲದ ಒಟ್ಟು ೨.೧೦ ಕೋಟಿ ರೂ.ಗಳ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪಿ.ಸುನೀಲ್‌ಕುಮಾರ ತಿಳಿಸಿದ್ದಾರೆ.
ಜಮಖಂಡಿಯ ಹುಣ್ಣೂರು ಚೆಕ್ ಪೋಸ್ಟ್ನಲ್ಲಿ ಕಾರ್ಯನಿರತ ಸ್ಟಾಟಿಸ್ಟಿಕಲ್ ಸರ್ವೆನೆಸ್ಟ್ ತಂಡದ ಸದಸ್ಯರು ತಪಾಸಣೆ ನಡೆಸುತ್ತಿರುವ ವೇಳೆಯಲ್ಲಿ ಅನುಮಾನಾಸ್ಪದ ಒಂದು ವಾಹನವನ್ನು ತಡೆದು ನಿಲ್ಲಿಸಿ ತಪಾಸನೆಗೊಳಪಡಿಸಿದಾಗ ದಾಖಲೆ ಇಲ್ಲದ ಅಂದಾಜು ೨.೧೦ ಕೋಟಿ ರೂ.ಗಳ ಮೊತ್ತವನ್ನು ವಶಪಡಿಸಿಕೊಳ್ಳಲಾಗಿದೆ.
ಸೌಹಾರ್ದ ಬ್ಯಾಂಕಿಗೆ ಸಂಬAಧಿಸಿದವರಾಗಿ ತಿಳಿಸಿದ್ದು, ಒದಗಿಸಿರುವ ದಾಖಲಾತಿಗಳು ಪರಿಪೂರ್ಣ ವೆಂದು ಪರಿಗಣಿಸಲು ಸಾಧ್ಯವಾಗದೆ ಇದ್ದ ಹಿನ್ನೆಲೆಯಲ್ಲಿ ಅವರಿಗೆ ದಾಖಲೆ ಒದಗಿಸಲು ಹೆಚ್ಚಿನ ಅವಕಾಶವನ್ನು ನೀಡಿ, ಸದರಿ ಮೊತ್ತವನ್ನು ಮುಟ್ಟುಗೋಲು ಹಾಕಿಕೊಂಡು ಚುನಾವಣಾಧಿಕಾರಿಗಳ ಕಚೇರಿಯಿಂದ ಜಮಖಂಡಿಯ ಸರ್ಕಾರಿ ಖಜಾನೆಗೆ ಜಮಾ ಮಾಡಲಾಗಿದೆ. ಪಂಚನಾಮೆ ಸಹಿತ ಜಿಲ್ಲಾಮಟ್ಟದ ಹಣ ಮುಟ್ಟುಗೋಲು ಪರಿಹಾರ ಸಮಿತಿಗೆ ವರದಿ ಸಲ್ಲಿಸಲಾಗಿದ್ದು, ಸದರಿ ಸಮಿತಿಯು ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಿದ್ದಾರೆ.
ಚೆಕ್ಪೋಸ್ಟ್ನಲ್ಲಿ ದೊರೆತಿರುವ ಹಣದ ಮಾಲಿಕರು ಒಂದು ಸೌಹಾರ್ದ ಕ್ರೆಡಿಟ್ ಸಹಕಾರಿ ಲಿಮಿಟೆಡ್‌ಗೆ ಸಂಬAಧಿಸಿದವರಾಗಿದ್ದು, ಅವರು ಹಿಪ್ಪರಗಿ ಸತ್ತಿ ಅಥನಿ ಬನಹಟ್ಟಿ ರಬಕವಿ ಬೇರೆ ಬೇರೆ ಶಾಖೆಗಳಿಗೆ ಹಣ ರವಾನಿಸುತಿರುವುದಾಗಿ ಮೌಖಿಕವಾಗಿ ಮಾಹಿತಿ ನೀಡಿರುತ್ತಾರೆ.
ಚೆಕ್ ಪೋಸ್ಟ್ನಲ್ಲಿ ತಪಾಸನೆ ನಡೆಸುವ ವೇಳೆಯಲ್ಲಿ ನಿಗದಿತ ನಮೂನೆಯಲ್ಲಿ ದಾಖಲೆಗಳು ಇಲ್ಲದೆ ಇರುವುದಕ್ಕೆ ಮತ್ತು ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ಸಾಗಾಣಿಕೆಗೆ ಬಳಸುವ ಸಂಶಯ ಕಂಡು ಬಂದಿರುವುದರಿAದ ಪ್ರಸ್ತುತ ಮುಟ್ಟುಗೋಲು ಕ್ರಮವನ್ನು ಕೈಗೊಳ್ಳಲಾಗಿದ್ದು, ಮುಂದಿನ ಕಾನೂನಿನ ಕ್ರಮದ ಬಗ್ಗೆ ಜಿಲ್ಲಾಮಟ್ಟದ ಸಮಿತಿಯು ಕೈಗೊಳ್ಳುವ ಕ್ರಮದ ಆಧಾರದಲ್ಲಿ ಮುಂದಿನ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.