ಗೋಕಾಕ್ : ತಾಲೂಕಿನ ಸುಕ್ಷೇತ್ರ ಅಂಕಲಗಿ ಅಡವಿ ಸಿದ್ಧೇಶ್ವರ ಮಠದ ಪೀಠಾಧಿಪತಿಯಾಗಿದ್ದ ಗುರು ಸಿದ್ಧೇಶ್ವರ ಮಹಾಸ್ವಾಮಿಗಳ ನಿಧನಕ್ಕೆ ಕೆಪಿಸಿಸಿ ಕಾರ್ಯಾದ್ಯಕ್ಷ ಸತೀಶ ಜಾರಕಿಹೊಳಿ ಅವರು ಕಂಬನಿ ಮಿಡಿದಿದ್ದು, ಶ್ರೀಗಳ ಅಂತಿಮ ದರ್ಶನ ಪಡೆದರು.
ವಿಶಿಷ್ಠಾದ್ವೈತ ಸಿದ್ಧಾಂತ ತಳಹದಿಯ ಮೇಲೆ ರಚನೆಯಾಗಿ ಮೂರು ಶತಮಾನಗಳ ಇತಿಹಾಸ ಹೊಂದಿದ ಇಲ್ಲಿನ ಅಂಕಲಗಿಮಠ ಈ ಭಾಗದ ವಿವಿಧ ಭಕ್ತರಿಗೆ, ದೀನ ದಲಿತರ ಬೆಳಕಾಗಿದೆ. ಅಂಕಲಗಿ ಮಠವು ಬೆಳಗಾವಿ ನಾಡಿನಲ್ಲಿ ವಿಶಿಷ್ಟ ಇತಿಹಾಸ, ಭವ್ಯ ಪರಂಪರೆಯನ್ನು ಹೊಂದಿದೆ. ಮಠದ ಸರ್ವತೋಮುಖ ಬೆಳವಣಿಗೆಗಳಲ್ಲಿ ಶ್ರೀ ಗಳ ಪಾತ್ರ ಗಣನೀಯವಾಗಿತ್ತು. ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅಪ್ರತಿಮ ಸೇವೆಯನ್ನು ಸಲ್ಲಿಸಿದ್ದರು. ಭಕ್ತರ ಪಾಲಿಗೆ ಪೂಜ್ಯನೀಯವಾಗಿತ್ತು.
ಶ್ರೀಮಠ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೆಸರು ವಾಸಿಯಾಗಿದೆ. ಮಠದಲ್ಲಿ ನಿತ್ಯ ತ್ರಿವಿಧ ದಾಸೋಹ, ಸಾವಿರಾರು ನಿರ್ಗತಿಕರ ಬಾಳಿಗೆ ಬೆಳಕು ನೀಡಿ ಮುನ್ನಡೆಸುತ್ತಿರುವ ಅಂಕಲಗಿ ಮಠ ಈ ಭಾಗದಲ್ಲಿ ಪ್ರಖ್ಯಾತಿ ಪಡೆದಿದೆ.
ನೇರ ನಡೆ-ನುಡಿಯ ಮೂಲಕ ಎಲ್ಲರ ಪ್ರೀತಿ-ಅಭಿಮಾನಕ್ಕೆ ಪಾತ್ರರಾಗಿದ್ದ ಶ್ರೀಗಳು.ಸದಾ ಹೊಸ ಆಲೋಚನೆಗಳ ಪ್ರಯೋಗ ಶೀಲ ಮನಸ್ಸು ಹೊಂದಿದರು. ಪೂಜ್ಯರು ಲಿಂಗ್ಯೆಕ್ಯ ಎಂಬ ವಿಷಯ ತೀವ್ರ ಆಘಾತವನ್ನುಂಟುಮಾಡಿದೆ.
ಸಮಾಜದ ಅಸಮಾನತೆಗಳ ವಿರುದ್ಧ ಧ್ವನಿಯಾಗಿದ್ದ ಶ್ರೀಗಳ ಚಿಂತನೆಗಳು ನಮ್ಮೆಲ್ಲರಿಗೂ ಮಾದರಿ. ಶ್ರೀಗಳ ಭಕ್ತವೃಂದಕ್ಕೆ ಈ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಶಾಸಕ ಸತೀಶ ಜಾರಕಿಹೊಳಿ ಅವರು ಸಂತಾಪ ಸೂಚಕದಲ್ಲಿ ತಿಳಿಸಿದ್ದಾರೆ.