This is the title of the web page
This is the title of the web page

ರಾಜ್ಯ ಸರ್ಕಾರ ವಿರುದ್ಧ ಒಳಮೀಸಲಾತಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವುದು ಖಂಡನೆ :ವಾಯ ಜಿ ಗಡಾದ

ರಾಜ್ಯ ಸರ್ಕಾರ ವಿರುದ್ಧ ಒಳಮೀಸಲಾತಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವುದು ಖಂಡನೆ :ವಾಯ ಜಿ ಗಡಾದ

 

ಗದಗ 27: ಇತ್ತೀಚೆಗೆ ರಾಜ್ಯ ಸರ್ಕಾರ ತಮ್ಮ ಕೊನೆಯ ಸಚಿವ ಸಂಪುಟ ಸಭೆಯಲ್ಲಿ ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗದ ವರದಿಯ ಒಳಮೀಸಲಾತಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವುದು ನಮ್ಮ ಸಂವಿಧಾನಕ್ಕೆ ಮಾಡಿರುವ ಅಪಮಾನ ಮತ್ತು ಸಹೋದರರಂತೆ ಬಾಳುತ್ತಿರುವ ದಲಿತ ಸಮುದಾಯಗಳಲ್ಲಿ ಜಗಳವನ್ನು ಹಚ್ಚಿ ಒಡೆದಾಳುವ ನೀತಿ ನಮ್ಮ ನಮ್ಮಲ್ಲಿ ಜಾತಿ ಜಾತಿ ಎಂಬ ವಿಷ ಬೀಜ ಬಿತ್ತಿ ನಮ್ಮ ಘನ ಸರ್ಕಾರ ಮೋಜನ್ನು ನೋಡುತ್ತಿದ್ದು ಅತ್ಯಂತ ಖೇದಕರ ವಿಷಯ.
ಹೀಗಾಗಿ ನಾವು ಲಂಬಾಣಿ, ಕೊರಮ, ಕೊರಚ, ಭೋವಿ, ವಡ್ಡರ ಎಲ್ಲ 99 ಜಾತಿಯ ಸಮಾಜದ ಮುಖಂಡರೂ ಸೇರಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರವಾದ ಹೋರಾಟವನ್ನು ಮಾಡುವುದು ಶತಶಿದ್ದ, ನಮ್ಮ ಜೀವವನ್ನು ಕೊಡಲು ನಾವು ಸಿದ್ದರಿದ್ದೇವೆ ಹೊರತು ಈ ಅವೈಜ್ಯಾನಿಕ ಎ ಜೇ ಸದಾಶಿವ ಆಯೋಗದ ವರದಿಯ ಒಳ ಮೀಸಲಾತಿಯನ್ನು ಜಾರಿಗೆ ಮಾಡಲು ಬಿಡುವುದಿಲ್ಲ, ಹೀಗಾಗಿ ನಾವು ರಾಜ್ಯಾದ್ಯಂತ ನಮ್ಮ ತಾಂಡಾ, ಹಾಡಿ, ಹಟ್ಟಿಗಳಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಾವುದೆ ರಾಜಕೀಯ ಮುಖಂಡರು ನಮ್ಮಲ್ಲಿಗೆ ಬಂದರೆ ಪ್ರವೇಶವಿಲ್ಲ ಎಂದು ನಮ್ಮ ರಾಜ್ಯ ಸರ್ಕಾರ ಹಾಗೂ ಎಲ್ಲ ಪಕ್ಷದ ರಾಜಕೀಯ ಧುರೀಣರುಗಳಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸುತ್ತಿದ್ದೇವೆ ಮತ್ತು ನಾವು ಅಂದರೆ 99 ಸಮಾಜದ ಮುಖಂಡರು ಈ ಒಳ ಮೀಸಲಾತಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫರಸ್ಸು ಮಾಡಿರುವುದನ್ನು ಪ್ರಶ್ನಿಸಿ ರಾಜ್ಯ ಉಚ್ಚ ನ್ಯಾಯಾಲಯ ಮತ್ತು ನಮ್ಮ ದೇಶದ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ತೀರ್ಮಾನವನ್ನು ದಿ. 26ರಂದು ಗದಗ ಜಿಲ್ಲಾ ಕೊರಮ ಭವನ ಸೆಟಲ್ಮೆಂಟ್‌ದಲ್ಲಿ ಪೂರ್ವಭಾವಿ ಸಭೆಯಲ್ಲಿ ಒಕ್ಕೊರಲಿನ ನಿರ್ಣಯ ಕೈಗೊಳ್ಳಲಾಗಿದೆ ಎಂದು ಲಂಬಾಣಿ, ಕೊರಮ, ಕೊರಚ, ಭೋವಿ, ವಡ್ಡರ ಹೀಗೆ ಹಲವು ಸಮುದಾಯದ ಮುಖಂಡರುಗಳು ತಿಳಿಸಿದರು.
ಈ ಸಂಧರ್ಭದಲ್ಲಿ ವಾಯ ಜಿ ಗಡಾದ, ಪರಶುರಾಮ್ ಕಟ್ಟಿಮನಿ, ಮೋಹನ್ ಕಟ್ಟಿಮನಿ, ಅಶೋಕ್ ಕಟ್ಟಿಮನಿ, ಸೋಮು ಲಮಾಣಿ, ಚಂದ್ರಕಾAತ ಚವ್ಹಾಣ, ಪಾಂಡು ಚವ್ಹಾಣ ನೀಲು ರಾಠೋಡ, ಶಂಕರ್ ಚತ್ರಪ್ಪ ನಾಯಕ, ಅನಿಲ್ ಕಾರಾಭಾರಿ, ಪರಮೇಶ ನಾಯಕ, ಪೂರಪ್ಪಾ ನಾಯಕ, ವೆಂಕಟೇಶ್ ದಾಮಲಪ್ಪ ರಾಥೋಡ್, ಬಾಲಚಂದ್ರ ತುಳಸಿಮನೀ, ದನಸಿಂಗ್ ನಾಯಕ, ಶ್ರೀನಿವಾಸ್ ಬೇವಿನಕಟ್ಟಿ, ಶಂಕರ್ ಪೂಜಾರ್, ಸಿದ್ಧನ ಗೋಕಾವಿ, ಆರ್ ವಾಯ್ ಕಟ್ಟಿಮನಿ, ಯೆಸ್ ಎಂ ಭಜಂತ್ರಿ ಭೀಮಪ್ಪ ಗೊಕಾವಿ, ಪರಶುರಾಮ್ ಗೋಕಾವಿ, ಹಣಮಂತ ಕಟ್ಟಿಮನಿ, ರಮೇಶ್ ಗಡಾದ, ಪರಶುರಾಮ ಗೋಕಾವಿ, ಪರಶುರಾಮ್ ಬಾಗಲಕೋಟೆ, ಲಕ್ಷ್ಮಣ ಬಾಗಲಕೋಟೆ, ಪ್ರಕಾಶ ಕೊರವರ್, ಸೇರಿದಂತೆ ಹಲವು ಸಮಾಜದ ಮುಖಂಡರೂ ಪೂರ್ವ ಭಾವಿ ಸಭೆಯಲ್ಲಿ ಉಪಸ್ಥಿತರಿದ್ದರು.