This is the title of the web page
This is the title of the web page

ಅಕ್ರಮ ಹಣ ಸಾಗಾಟ : ಕಾಂಚಾಣ ರಣಬೇಟೆಗೆ ಖಾಕಿ ಬಿಗಿ ಕ್ರಮ

ಅಕ್ರಮ ಹಣ ಸಾಗಾಟ : ಕಾಂಚಾಣ ರಣಬೇಟೆಗೆ ಖಾಕಿ ಬಿಗಿ ಕ್ರಮ

ವಿಶೇಷ ವರದಿ

ಸುರೇಶ ನೇಲ್ಲಿ೯

ಬೆಳಗಾವಿ: ವಿಧಾನಸಭೆ ಚುನಾವಣೆಗೆ ತಯಾರಿ ನಡೆದಿದ್ದು ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಚುನಾವಣೆಯು ರಾಜಕೀಯ ಪಕ್ಷಗಳ ಪಾಲಿಗೆ ಪ್ರತಿಷ್ಠೆಯ ಅಖಾಡವಾಗಿದ್ದು ಹಣದ ಹೊಳೆಯೇ ಹರಿಯುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಪೊಲೀಸರು ತೀವ್ರ ನಿಗಾ ವಹಿಸಿದ್ದಾರೆ.

ಬೆಳಗಾವಿಯಲ್ಲೀ ಈಗಾಗಲೇ ನಾಲ್ಕೈದು ಚೆಕ್‌ ಪೋಸ್ಟ್‌ ಗಳಲ್ಲಿ ಲಕ್ಷಾಂತರ ಹಣ ಸಾಗಿಸುವ ವೇಳೆಯಲ್ಲಿ ಬಂಧಿಸಿ, ಹಣ ಜಪ್ತಿ ಮಾಡಲಾಗಿದೆ.

ಕಂಡಲೆಲ್ಲ ಚೆಕ್ ಪೋಸ್ಟ್‌:
ಬಹುತೇಕ ಜಿಲ್ಲೆಗಳಲ್ಲಿ ಗಡಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಚೆಕ್ ಪೋಸ್ಟ್‌ಗಳನ್ನು ಹಾಕಲಾಗಿದೆ. ಈ ಚೆಕ್ ಪೋಸ್ಟ್‌ಗಳಲ್ಲಿ ಆಯಾ ಠಾಣಾ ಸರಹದ್ದಿನ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದ್ದು ವಾಹನಗಳನ್ನು ಪರಿಶೀಲಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಹಲವು ಕಡೆ ಅಕ್ರಮವಾಗಿ ಹಣ ಸಾಗಿಸುತ್ತಿರು ಪ್ರಕರಣಗಳು ಬೆಳಕಿಗೆ ಬರುತ್ತಿವೆ.

ಇದೇ ವೇಳೆ, ಕಲಬುರಗಿ ಜಿಲ್ಲೆಯ ಚೆಕ್ ಪೋಸ್ಟ್‌ಗಳಲ್ಲಿ ಬುಧವಾರ ಯಾವುದೇ ದಾಖಲೆ ಇಲ್ಲದೆ ಹಣ ಸಾಗಿಸುತ್ತಿದ್ದ ಪ್ರಜರಣವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಸುಮಾರು 1.9 ಕೋಟಿ ರೂಪಾಯಿಗಳನ್ನು ಪೊಲೀಸರು ವಶಪಡಿಸಿಕೊಂಡಿ ದ್ದಾರೆ

ಕಿಣ್ಣಿಸಡಕ್ ಚೆಕ್ ಪೋಸ್ಟ್ ಬಳಿ 1.4 ಕೋಟಿ ರೂಪಾಯಿ, ಜೇವರ್ಗಿ ಚೆಕ್ ಪೋಸ್ಟ್ ಬಳಿ 50 ಲಕ್ಷ ರೂಪಾಯಿ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ಯಶವಂತ ವಿ.‌ಗುರುಕರ್ ತಿಳಿಸಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ಲಕ್ಷಾಂತರ ರೂ. ಸೀಜ್​
ಯುಗಾದಿ ಹಬ್ಬದಿನದಂದು ಪೊಲೀಸ್‌ ರ ಕಣ್ತಪ್ಪಿಸಿ ಅಕ್ರಮವಾಗಿ ಆ್ಯಕ್ಟೀವ್ ಹೋಂಡಾದಲ್ಲಿ ದಾಖಲೆ ಇಲ್ಲದೆ ತೆಗೆದುಕೊಂಡು ಹೋಗುತ್ತಿದ್ದ 13 ಲಕ್ಷ ರೂಪಾಯಿ ಹಣವನ್ನು ಖಚಿತ ಮಾಹಿತಿ ಮೇರೆಗೆ ಬೆಳಗಾವಿ ಮಾರ್ಕೆಟ್ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನಗರದ ಪೋರ್ಟ್ ರಸ್ತೆಯ ಪಿಂಪಲಕಟ್ಟಾ ಬಳಿ ದಾಳಿ ನಡೆಸಿ ಹಣ ವಶಪಡಿಸಿಕೊಳ್ಳಲಾಗಿದೆ. ಕಪಿಲೇಶ್ವರ ಕಾಲೋನಿ ನಿವಾಸಿ ಮಂಗಲ್‌ಬೈ ಪ್ರಜಾಪತ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಹುಕ್ಕೇರಿ ತಾಲೂಕಿನ ಬುಗಟೆ ಆಲೂರು ಚೆಕ್ ಪೋಸ್ಟ್​ನಲ್ಲಿ 1.9 ಲಕ್ಷ ರೂ. ಜಪ್ತಿ ಮಾಡಿದ್ದಾರೆ. ರಾಯಬಾಗ ತಾಲೂಕಿನ ಹಾರೂಗೇರಿ ಚೆಕ್ ಪೋಸ್ಟ್​ನಲ್ಲಿ 4 ಲಕ್ಷ ರೂ. ಹಾಗೂ ಅಥಣಿ ತಾಲೂಕಿನಲ್ಲಿ 3.45 ಲಕ್ಷ ರೂ. ಅನ್ನು ವಶಕ್ಕೆ ಪಡೆಯಲಾಗಿದೆ. ಒಟ್ಟು 22.35 ಲಕ್ಷ ರೂ. ಪೊಲೀಸರು ಸೀಜ್ ಮಾಡಿದ್ದಾರೆ.