ಗದಗ: ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಯಾವುದೇ ದಾಖಲೆಯಿಲ್ಲದ 15 ಲಕ್ಷ ರೂಪಾಯಿಗಳನ್ನು ಶಹರ ಠಾಣೆಯ ಪೊಲೀಸರು ಸೀಜ್ ಮಾಡಿದ್ದಾರೆ.
ಶಿಗ್ಗಾವಿ ತಾಲೂಕಿನ ಹುಲಗೂರನಿಂದ ದೇವದುರ್ಗ ಕಡೆ ಹೊರಟಿದ್ದ ಕಾರು ಗದಗನ ಆರ್.ಕೆ ನಗರ ಬಳಿಯ ಚೆಕ್ಪೋಸ್ಟ್ಗೆ ಬಂದಿದೆ. ಈ ವೇಳೆ ಪೊಲೀಸರು ಕಾರನ್ನು ಪರಿಶೀಲನೆ ಮಾಡಿದ್ದಾರೆ. ಪರಿಶೀಲನೆ ವೇಳೆ ದಾಖಲೆ ಇಲ್ಲದ ಒಟ್ಟು 15 ಲಕ್ಷ ರೂ.ಗಳು ಪತ್ತೆಯಾಗಿವೆ. ಗದಗ ಎಸ್ಪಿ ಬಿ.ಎಸ್ ನೇಮಗೌಡ ಮಾರ್ಗದರ್ಶನದಲ್ಲಿ ಕಾರು ಪರಿಶೀಲನೆ ಮಾಡಿ ಹಣ ವಶಕ್ಕೆ ಪಡೆಯಲಾಗಿದೆ. ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.