ಬೆಂಗಳೂರು: ಸ್ವಾತಂತ್ರ ಉದ್ಯಾನವನದಲ್ಲಿ ಪಂಚಮಸಾಲಿ ಮೀಸಲಾತಿಗಾಗಿ ಧರಣಿ ಸತ್ಯಾಗ್ರಹ ಕೈಗೊಂಡಿರುವ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರು ಇತ್ತೀಚಿಗೆ ಅರೋಗ್ಯದ ವ್ಯಾತ್ಯಸದ ಕಾರಣದಿಂದಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರವರನ್ನು
ಬೆಂಗಳೂರಿನ ಪದ್ಮನಾಭನ ನಗರದ ಮನೆಗೆ ಮರಳಿ ಬಂದ ವಿಷಯ ತಿಳಿದು , ಭೇಟಿ ಮಾಡಿ ಅರೋಗ್ಯ ವಿಚಾರಿಸಿದರು
2ಎ ಮೀಸಲಾತಿ ಹೋರಾಟದ ಬಗ್ಗೆ ದೇವೇಗೌಡರು ಶ್ರೀಗಳಿಂದ ಮಾಹಿತಿ ಪಡೆದರು. ತಾವುಗಲೂ ಬೆಂಬಲ ನೀಡಬೇಕೆಂದು ಶ್ರೀಗಳು ಮನವಿ ಮಾಡಿದರು.
ನಂತರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಶ್ರೀಗಳು ದೇವೇಗೌಡರು ಕೆಲವು ತಿಂಗಳ ಹಿಂದೆ ಆರಾಮ ಇಲ್ಲದ ಸಂದರ್ಭದಲ್ಲಿ ಅನೇಕ ಪೂಜ್ಯರು ಭೇಟಿ ಮಾಡಿದ್ದರು. ನಾವುಗಳು ಬೆಳಗಾವಿಯಲ್ಲಿ ಹೋರಾಟದಲ್ಲಿ ಭಾಗಿಯಾದ್ದ ಕಾರಣ ಭೇಟಿ ಮಾಡಲು ಆಗಿರಲಿಲ್ಲ.
ಆದ್ದರಿಂದ ಇಂದು ಭೇಟಿ ಮಾಡಿ ಮಾಡಲಾಗಿದೆ. ಶ್ರಿಯುತರು ಬೇಗ ಗುಣಮುಖವಾಗಿ ನಾಡಿನ ಜಲ , ನೆಲ ಭಾಷೆ, ರೈತರ ಬಗ್ಗೆ ಹೋರಾಡುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಹಾಜರಿದ್ದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಯವರು ಶ್ರೀಗಳನ್ನು ಬರಮಾಡಿಕೊಂಡು ಗೌರವಿಸಿದರು.
ಈ ಸಂದರ್ಭದಲ್ಲಿ ಪಂಚ ಸೇನಾ ಅಧ್ಯಕ್ಷ ಡಾ ಬಿಎಸ್ ಪಾಟಿಲ್ ನಾಗರಳ್ ಹುಲಿ, ನಗರ ಘಟಕದ ಅಧ್ಯಕ್ಷ ಶಿವಪುತ್ರ , ಕೊಡಗು ಜಿಲ್ಲಾ ಅಧ್ಯಕ್ಷ ಮೋಹನ ಗೌಡ , ಬೆಳಗಾವಿಯ ರಾಜು ಬಾಗೇವಾಡಿ, ಜಿಲ್ಲಾ ಅಧ್ಯಕ್ಷ ಕಾಂತೆಶ , ಹಾಗೂ ರಾಮದುರ್ಗದ ಮಲ್ಲನಗೌಡ ಮೊದಲಾದವರು ಉಪಸ್ಥಿತರಿದ್ದರು.