This is the title of the web page
This is the title of the web page

ನೇತ್ರದಾನ ಹೆಚ್ಚಳ ನೇತ್ರದಾನ ಮಾಡೋದು ಒಂದು ಪುಣ್ಯದ ಕೆಲಸ, ನೇತ್ರದಾನ ಮಹಾದಾನ ಕನ್ನಡದ ಕಣ್ಮಣಿ ಪುನೀತರಾಜಕುಮಾರ್

ನೇತ್ರದಾನ ಹೆಚ್ಚಳ ನೇತ್ರದಾನ ಮಾಡೋದು ಒಂದು ಪುಣ್ಯದ ಕೆಲಸ, ನೇತ್ರದಾನ ಮಹಾದಾನ ಕನ್ನಡದ ಕಣ್ಮಣಿ ಪುನೀತರಾಜಕುಮಾರ್

ವಿಶೇಷ ಲೇಖನ

ನೇತ್ರದಾನ ಹೆಚ್ಚಳ ನೇತ್ರದಾನ ಮಾಡೋದು ಒಂದು ಪುಣ್ಯದ ಕೆಲಸ, ನೇತ್ರದಾನ ಮಹಾದಾನ ಅಂತಾರೆ.ಕನ್ನಡದ ಕಣ್ಮಣಿ ಪುನೀತರಾಜಕುಮಾರ್ ಕನ್ನಡದ ಕಣ್ಮಣಿ ಪುನೀತರಾಜಕುಮಾರ್ ಅವರ ನಿಧನದÀ ನಂತರ ಇಷ್ಟೊಂದು ಅಪಾರ ಸಂಖ್ಯೆಯಲ್ಲಿ ಜನರು ನೇತ್ರದಾನಕ್ಕೆ ಮುಂದಾಗಿರುವುದು ಒಂದು ಇತಿಹಾಸವಾಗಿದೆ. ಪುನೀತ್ ನಮ್ಮನ್ನೆಲ್ಲಾ ಅಗಲಿದ್ದರೂ ಅವರ ಕಾರ್ಯವೈಖರಿ ಸಾವಿರಾರು ಜನರಿಗೆ ದಾರಿದೀಪವಾಗುತ್ತಿದೆ.

ಕರ್ನಾಟಕ ರತ್ನ, ಡಾ. ಪುನೀತ್ ರಾಜ್‌ಕುಮಾರ್ ಇಂದು ನಮ್ಮ ಜೊತೆಗಿರದಿದ್ದರೂ ಅವರ ಇಂತಹ ಅನೇಕ ಮಾನವೀಯ ಹಾಗೂ ಅರ್ಥಪೂರ್ಣ ಕೆಲಸ, ಕಾರ್ಯಗಳು ಮಾತ್ರ ಅನೇಕ ಜನರನ್ನು ಪದೇ ಪದೇ ಒಳ್ಳೆಯ ಕೆಲಸಗಳನ್ನು ಮಾಡುವಂತೆ ಉತ್ತೇಜಿಸುತ್ತಲೇ ಇದೆ.
ಇತ್ತೀಚಿನ ದಿನಗಳಲ್ಲಿ ನಮ್ಮ ಕರ್ನಾಟಕ ರಾಜ್ಯ ನೇತ್ರದಾನದಲ್ಲಿ ದೇಶದಲ್ಲೇ ಅತಿ ಹೆಚ್ಚು ನೇತ್ರದಾನ ಮಾಡುತ್ತಿರುವ ರಾಜ್ಯವಾಗಿ ಹೊರಹೊಮ್ಮುತ್ತಿದೆ. ಇದಕ್ಕೆ ಪ್ರಮುಖ ಕಾರಣ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಎಂದರೆ ಬಹುಶಃ ತಪ್ಪಾಗಲಾರದು. ಪುನೀತ್ ರಾಜ್‌ಕುಮಾರ್ ಅಗಲಿಕೆ ಬಳಿಕ ಅವರು ತಮ್ಮ ನೇತ್ರದಾನದ ಮೂಲಕ ಇಡೀ ಪ್ರಪಂಚಕ್ಕೆ ಸ್ಪೂರ್ತಿಯಾದರು. ಅವರನ್ನೇ ಅನುಸರಿಸಿದ ಅನೇಕರು ಇಂದಿಗೂ ಪ್ರತಿನಿತ್ಯ ನೇತ್ರದಾನದ ಫಾರ್ಮ್ಗೆ ಸಹಿ ಹಾಕುತ್ತಿದ್ದಾರೆ. ಈ ಮೂಲಕ ಅಪ್ಪು ಹಾದಿಯಲ್ಲೇ ಸಮಾಜಕ್ಕೆ ಒಳ್ಳೆಯದಾಗುವಂತೆ ಹೆಜ್ಜೆ ಇಟ್ಟಿದ್ದಾರೆ. ನಾವು ಪುನರ್ಜನ್ಮದಲ್ಲಿ ನಂಬಿಕೆ ಇಡುವುದಕ್ಕಿಂತ ಈ ರೀತಿ ನೇತ್ರದಾನ ಮಾಡುವ ಮೂಲಕ ಇನ್ನೊಬ್ಬರು ಕೂಡ ಈ ಸುಂದರ ಜಗತ್ತನ್ನು ಕಾಣಲು ಅವಕಾಶ ಮಾಡಿಕೊಡಬಹುದು.
ಈ ಹಿಂದೆ ಡಾ.ರಾಜಕುಮಾರ್ ಅವರ ಬಂಗಾರದ ಮನುಷ್ಯ ಸಿನಿಮಾ ನೋಡಿ ಅದೆಷ್ಟೋ ಯುವಜನರು ಕೃಷಿಯತ್ತ ಮುಖಮಾಡಿದ್ದರು. ಅದೇ ರೀತಿ ಇಂದು ಅವರ ಪುತ್ರರತ್ನ, ಯುವರತ್ನ, ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರ ಒಳ್ಳೆಯ ಕೆಲಸಗಳು ಕೂಡಾ ಲಕ್ಷಾಂತರ ಜನರಿಗೆ ಸ್ಪೂರ್ತಿಯಾಗುತ್ತಿರುವುದು ಒಂದು ಒಳ್ಳೆಯ ಬದಲಾವಣೆಯಾಗಿದೆ. ರಾಜಕುಮಾರನ ಮುದ್ದಿನ ಮಗನಾಗಿ ಜನಿಸಿದ ಪುನೀತ್ ರಾಜಕುಮಾರ್ ಬದುಕಿದ್ದಾಗಲೂ ರಾಜನಂತೆ ದಾನ ಧರ್ಮ ಮಾಡುತ್ತಾ ಬಾಳಿ ಬದುಕಿದವರು. ಅಂತಹ ಪುನೀತ್ ಇಂದು ನಮ್ಮೊಂದಿಗಿಲ್ಲ ಎನ್ನುವ ಸತ್ಯ ಅರಗಿಸಿಕೊಳ್ಳಲಾಗದಿದ್ದರೂ ಅವರ ಇಂತಹ ಆದರ್ಶಗಳು ಮಾತ್ರ ಇಂದಿಗೂ ಸಮಾಜದಲ್ಲಿ ಅಜರಾಮರವಾಗಿವೆ.
ಮಾನವತೆಯ ಸಾಕಾರ ಮೂರ್ತಿಯಾಗಿದ್ದ ಅಪ್ಪು ಅವರು ಇಂದು ನಮ್ಮೊಂದಿಗೆ ಇಲ್ಲದಿರುವಿಕೆಯ ಭಾವ ಬಹಳ ಕಾಡುತ್ತದಾದರೂ, ಅವರ ಆದರ್ಶಗಳನ್ನು ಹಾಗೂ ಗುಣಗಳನ್ನು ನಮ್ಮಲ್ಲಿಯೂ ಅಳವಡಿಸಿಕೊಂಡು ಅವರು ಮಾಡಿದಂತಹ ಕಾರ್ಯಗಳನ್ನು ನಾವೂ ಮಾಡುವ ಮೂಲಕ ಅವರನ್ನು ಅಮರರನ್ನಾಗಿಸಬಹುದು. ಜೊತೆಗಿರದ ಜೀವ ಎಂದಿಗಿAತ ಜೀವಂತ. ಹಾಗಾಗಿ ಅಪ್ಪು ಅಮರ, ಅಜರಾಮರ. ಮತ್ತೆ ಹುಟ್ಟಿ ಬಾ ಅಪ್ಪು.