ತೆರಿಗೆ ಇಲಾಖೆಯ ಭರ್ಜರಿ ಬೇಟೆ: ಬೆಳಗಾವಿಯತ್ತ ಹೋರಟ್ಟಿದ 50 ಲಕ್ಷ ಮೌಲ್ಯದ ಮದ್ಯ ವಶ

ತೆರಿಗೆ ಇಲಾಖೆಯ ಭರ್ಜರಿ ಬೇಟೆ: ಬೆಳಗಾವಿಯತ್ತ ಹೋರಟ್ಟಿದ 50 ಲಕ್ಷ ಮೌಲ್ಯದ ಮದ್ಯ ವಶ

 

ಹುಬ್ಬಳ್ಳಿ: ಲಾರಿ ಟ್ಯಾಂಕರ್‌ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 50 ಲಕ್ಷ ಮೌಲ್ಯದ ಮದ್ಯವನ್ನು ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ಧಾರವಾಡದ ನರೇಂದ್ರ ಟೋಲ್‌ನಲ್ಲಿ ವಶಪಡಿಸಿಕೊಂಡಿದ್ದಾರೆ. ಚಾಲಕ ಪರಾರಿಯಾಗಿದ್ದಾನೆ.

ಇದು ಬೆಂಗಳೂರಿನಿಂದ ಬೆಳಗಾವಿಗೆ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಲಾರಿ ಚಾಲಕ ರಾಜಸ್ಥಾನದ ಮೋಹನ್‌ಲಾಲ್‌( 38) ನಾಪತ್ತೆಯಾದ ಆರೋಪಿ. ಎರಡನೇ ಶನಿವಾರ, ಸಂಕ್ರಾಂತಿ ಹಬ್ಬದ ನಿಮಿತ್ತ ರಜೆ ಇದ್ದುರಿಂದ ಟ್ಯಾಂಕರ್‌ ತಪಾಸಣೆ ಮಾಡಿರಲಿಲ್ಲ. ಜನವರಿ 16ರಂದು ಭೌತಿಕ ತಪಾಸಣೆ ಮಾಡಿದಾಗ ಟ್ಯಾಂಕರ್‌ನಲ್ಲಿ ಮದ್ಯ ಬಾಟಲಿಗಳಿದ್ದ ಬಾಕ್ಸ್‌ಗಳಿದ್ದವು’ ಎಂದು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನ ಸೋಮಾನಿ ಟ್ರೇಡರ್ಸ್ ಹೆಸರಲ್ಲಿ ರಾಜಸ್ಥಾನದ ನಿಶಾಂತ ಲುಬ್ರಿಕಂಟ್ಸ್‌ಗೆ ಸಾಗಾಟ ಮಾಡಲು ನಕಲಿ ಬಿಲ್ ಸೃಷ್ಟಿಸಲಾಗಿದೆ. ಈ ಎರಡೂ ಹೆಸರುಗಳೂ ನಕಲಿಯಾಗಿವೆ. 20 ಸಾವಿರ ಲೀಟರ್‌ ಸಾಮರ್ಥ್ಯದ ಟ್ಯಾಂಕರ್‌ನಲ್ಲಿ ಕೇವಲ 3 ಸಾವಿರ ಲೀಟರ್ ಸುಟ್ಟ ಆಯಿಲ್‌ಗೆ ಸಾಗಣೆ ಮಾಡಲು ಬಿಲ್‌ನಲ್ಲಿ ನಮೂದಿಸಲಾಗಿತ್ತು ಎಂದರು. ವಶಪಡಿಸಿಕೊಳ್ಳಲಾಗಿರುವ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ಹೇಳಿದರು.