This is the title of the web page
This is the title of the web page

ದ್ವಿತಿಯ ಪಿಯುಸಿ ಫಲಿತಾಂಶ : ಬಾಲಕಿಯರೇ ಮೇಲುಗೈ

ದ್ವಿತಿಯ ಪಿಯುಸಿ ಫಲಿತಾಂಶ : ಬಾಲಕಿಯರೇ ಮೇಲುಗೈ

ಬೆಂಗಳೂರು: ದ್ವಿತಿಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿಯೂ ಕೂಡ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ಈ ಬಾರಿ ಒಟ್ಟು 7,02,821 ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಿತ್ತು. ಅವರಲ್ಲಿ 23,754 ವಿದ್ಯಾರ್ಥಿಗಳು ಗೈರಾಗಿದ್ದು, ಒಟ್ಟು 5,24,209 ಮಂದಿ ಪಾಸ್ ಆಗಿದ್ದಾರೆ. ಈ ಬಾರಿ ಶೇಕಡಾ 74.67 ಫಲಿತಾಂಶ ಬಂದಿದೆ. ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ ಸ್ಥಾನ ಪಡೆದುಕೊಂಡರೆ, ಕೊಡಗು ಜಿಲ್ಲೆಗೆ 3ನೇ ಸ್ಥಾನ ಹೋಗಿದೆ. ಅದೇ ರೀತಿ ಯಾದಗಿರಿಗೆ ಕೊನೆ ಸ್ಥಾನ ಸಿಕ್ಕಿದೆ.

ಕಲಾ ವಿಭಾಗ: ತಬಸುಂ ಶೇಕ್ (ಒಟ್ಟು ಅಂಕ: 593/600)
ವಾಣಿಜ್ಯ ವಿಭಾಗ: ಅನನ್ಯ ಕೆಎ (ಒಟ್ಟು ಅಂಕ: 600/600)
ವಿಜ್ಞಾನ ವಿಭಾಗ: ಎಸ್.ಎಂ.ಕೌಶಿಕ್ (ಒಟ್ಟು ಅಂಕ: 596/600) ಮತ್ತು ಸುರಭಿ (ಒಟ್ಟು ಅಂಕ: 596/600)

ಕಲಾ ವಿಭಾಗ

ಜಿ.ಎಲ್​.ಖುಷನಾಯ್ಕ್ (600ಕ್ಕೆ 592 ಅಂಕ)
ಡಡ್ಡಿ ಕರಿಬಸಮ್ಮ (600ಕ್ಕೆ 592 ಅಂಕ)
ಮುತ್ತೂರು ಮಲ್ಲಮ್ಮ (600ಕ್ಕೆ 592 ಅಂಕ)
ಪ್ರಿಯಾಂಕಾ ಕುಲಕರ್ಣಿ (600ಕ್ಕೆ 592 ಅಂಕ)
ರಾಹುಲ್​ ಮೋತಿಲಾಲ್ ರಾಥೋಡ್ (600ಕ್ಕೆ 592 ಅಂಕ)

ವಾಣಿಜ್ಯ ವಿಭಾಗ:

ಶಿವಮೊಗ್ಗದ ಡಿ.ಎನ್​.ಅನ್ವಿತಾ (600ಕ್ಕೆ 596 ಅಂಕ)
ಛಾಯಾ ರವಿಕುಮಾರ್​ (600ಕ್ಕೆ 596 ಅಂಕ)
ಬಾಗಲಕೋಟೆಯ ಖುಷಿ ವೈ (600ಕ್ಕೆ 596 ಅಂಕ)
ಸ್ವಾತಿ ಎಸ್​ ಪೈ (600ಕ್ಕೆ 596 ಅಂಕ)
ಧನ್ಯಶ್ರೀ ರಾವ್​ (600ಕ್ಕೆ 596 ಅಂಕ)
ದಿಶಾ ರಾವ್​ (600ಕ್ಕೆ 596 ಅಂಕ)
ವರ್ಷಾ ಸತ್ಯನಾರಾಯಣ (600ಕ್ಕೆ 596 ಅಂಕ)
ಎನ್​​.ಇಂಚರಾ (600ಕ್ಕೆ 596 ಅಂಕ)
ಗಾನಾ (600ಕ್ಕೆ 596 ಅಂಕ)