This is the title of the web page
This is the title of the web page

ಕಾಂಗ್ರೆಸ್‌ನಿಂದ ಅಭ್ಯರ್ಥಿಗಳ 2ನೇ ಪಟ್ಟಿ ರಿಲೀಸ್ : ಕಲಿಗಳ ಕದನಕ್ಕೆ ಕ್ಷೇತ್ರ ಎಲ್ಲಲಿ

ಕಾಂಗ್ರೆಸ್‌ನಿಂದ ಅಭ್ಯರ್ಥಿಗಳ 2ನೇ ಪಟ್ಟಿ ರಿಲೀಸ್ : ಕಲಿಗಳ ಕದನಕ್ಕೆ ಕ್ಷೇತ್ರ ಎಲ್ಲಲಿ

 

ನವದೆಹಲಿ: ಬಹು ಕುತುಹಲ ಕೆರಳಿಸಿದ ಕಾಂಗ್ರೆಸ್‍ನಿಂದ ಅಭ್ಯರ್ಥಿಗಳ 2 ನೇ ಪಟ್ಟಿ ರಿಲೀಸ್ ಆಗಿದ್ದು, 42 ಮಂದಿ ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಕೈ ನಾಯಕರಿಗೆ ಅಚ್ಚರಿ ಕ್ಷೇತ್ರ ಲಭಿಸಿದೆ.

ಕಲಘಟಗಿಯಲ್ಲಿ ನಾಗರಾಜ್ ಚಬ್ಬಿಗೆ ಟಿಕೆಟ್ ಕೊಡಲು ಡಿಕೆಶಿ ಪಟ್ಟು ಹಿಡಿದಿದ್ದರು. ಆದರೆ ಸಂತೋಷ್‌ ಲಾಡ್ ಗೆ ಟಿಕೆಟ್ ಕೊಡಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ಬೇಲೂರಿನಲ್ಲಿ ಡಿಕೆಶಿ ಕೈ ಮೇಲಾಗಿದೆ. ರುದ್ರೇಶ್ ಗೌಡ ಕುಟುಂಬ ಹಾಗೂ ಸಿದ್ದರಾಮಯ್ಯ ಬಣ ಎರಡಕ್ಕೂ ಸಡ್ಡು ಹೊಡೆದು ತಮ್ಮ ಆಪ್ತ ಮಾಜಿ ಸಚಿವ ಗಂಡಸಿ ಶಿವರಾಂ ಗೆ ಟಿಕೆಟ್ ಕೊಡಿಸುವಲ್ಲಿ ಡಿಕೆಶಿ ಯಶಸ್ವಿಯಾಗಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್ ಕೋಲಾರಕ್ಕೆ ಟಿಕೆಟ್ ಪ್ರಕಟಿಸಿಲ್ಲ. ಇತ್ತ ಹಾಲಿ ಶಾಸಕ ವಿ ಮುನಿಯಪ್ಪ ಕ್ಷೇತ್ರ ಶಿಡ್ಲಘಟ್ಟ ಕೂಡ ಘೋಷಣೆ ಆಗಿಲ್ಲ. ವಲಸಿಗರ ಆಸೆ ಬಿಟ್ಟ ಕಾಂಗ್ರೆಸ್, ಚಿತ್ರದುರ್ಗದಲ್ಲಿ ಮಾಜಿ ಪರಿಷತ್ ಸದಸ್ಯ ರಘು ಆಚಾರ್ ಗೆ ಟಿಕೆಟ್ ಕೈ ತಪ್ಪಿದ್ದು, ದೊಡ್ಡಣ್ಣ ಅಳಿಯ ವೀರೇಂದ್ರ ಪಪ್ಪಿಗೆ ಮಣೆ ಹಾಕಿದೆ. ಹಾಲಿ ಶಾಸಕರ ಆಯ್ಕೆಯಲ್ಲಿ ಗೊಂದಲ ಮುಂದುವರಿದಿದೆ. ಒಟ್ಟಿನಲ್ಲಿ ಲಿಂಗಸ್ಗೂರ್, ಪುಲಕೇಶಿಯ ನಗರ, ಕುಂದಗೋಳ, ಹರಿಹರ, ಶಿಡ್ಲಘಟ್ಟಕ್ಕೆ ಅಭ್ಯರ್ಥಿಗಳು ಅಂತಿಮವಾಗಿಲ್ಲ.

ಸವದತ್ತಿ ಯಲ್ಲಮ್ಮ- ವಿಶ್ವಾಸ್ ವಸಂತ್ ವಿದ್ಯಾ, ಮುಧೋಳ್ ಎಸ್‍ಸಿ- ರಾಮಪ್ಪ ಬಾಳಪ್ಪ ತಿಮ್ಮಾಪೂರ್, ನಿಪ್ಪಾಣಿ- ಕಾಕಾಸಾಹೇಬ್ ಪಾಟೀಲ್, ಗೋಕಾಕ್- ಮಹಾಂತೇಶ್ ಕಡಾಡಿ, ಕಿತ್ತೂರು- ಬಾಬಾ ಸಾಹೇಬ್ ಡಿ ಪಾಟೀಲ್, ಬಿಳಗಿ- ಜಿ.ಟಿ ಪಾಟೀಲ್, ಬಾದಾಮಿ- ಭೀಮಸೇನಾ ಬಿ ಚಿಮ್ನಕಟ್ಟಿ, ಬಾಗಲಕೋಟೆ – ಹುಲ್ಲಪ್ಪ ವೈ ಮೇಟಿ, ಬಿಜಾಪುರ ನಗರ – ಅಬ್ದುಲ್ ಅಹ್ಮದ್ ಖಾಜಸಾಹೇಬ್ ಮುಷರಫಿ, ನಾಗಠಾಣ ಎಸ್‍ಸಿ- ವಿಠಲ್ ಕಟಕದೋಂಧ್, ಅಫ್ಜಲಪುರ್- ಎಂವೈ ಪಾಟೀಲ್, ಯಾದಗಿರಿ- ಚನ್ನ ರೆಡ್ಡಿ ಪಾಟೀಲ್, ಗುರುಮಿಠ್ಕಲ್- ಚಿಂಚನಸೂರ್, ಕಲಬುರಗಿ ದಕ್ಷಿಣ- ಅಲ್ಲಮಪ್ರಭು ಪಾಟೀಲ್, ಬಸವಕಲ್ಯಾಣ – ವಿಜಯ್ ಧರ್ಮಸಿಂಗ್, ಗಂಗಾವತಿ – ಇಕ್ಬಾಲ್ ಅನ್ಸಾರಿ, ನರಗುಂದ- ಬಿ.ಆರ್ ಯಾವಗಲ್, ಧಾರವಾಡ- ವಿನಯ್ ಕುಲಕರ್ಣಿ, ಕಲಘಟಗಿ- ಸಂತೋಷ್ ಎಸ್ ಲಾಡ್, ಸಿರಸಿ- ಭಿಮಣ್ಣ ನಾಯಕ್, ಯಲ್ಲಾಪುರ- ವಿಎಸ್ ಪಾಟೀಲ್,