ಬಾಲಕಿಯ ಮೇಲೆ ಕಾಮುಕ ನಿರಂತರ ದುಷ್ಕೃತ್ಯ: ಆರೋಪಿಗೆ ​20 ವರ್ಷ ಜೈಲು ಶಿಕ್ಷೆ

ಬಾಲಕಿಯ ಮೇಲೆ ಕಾಮುಕ ನಿರಂತರ ದುಷ್ಕೃತ್ಯ: ಆರೋಪಿಗೆ ​20 ವರ್ಷ ಜೈಲು ಶಿಕ್ಷೆ

 

ಉಡುಪಿ: ಬಾಲಕಿಯ ಆಟೋದಲ್ಲಿ ಶಾಲೆಗೆ ಬಿಡುತ್ತಿದ್ದ ಕಾಮುಕ ಅಪ್ರಾಪ್ತ ಬಾಲಕಿಯ ಅತ್ಯಾಚಾರವೆಸಗಿ ಅರೆನಗ್ನ ವಿಡಿಯೋ ಚಿತ್ರೀಕರಣ ಮಾಡಿದ್ದಾನೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆರೋಪಿ ಬಂಧನ ಮಾಡಲಾಗಿದೆ.

ಬ್ಲಾಕ್ ಮೇಲ್ ಮಾಡಿದ್ದಲ್ಲದೆ, ವಿಡಿಯೋ ವೈರಲ್ ನೆಪದಲ್ಲಿ ರೆಸಾರ್ಟ್, ಲಾಡ್ಜ್ ಗೆ ಕರೆದುಕೊಂಡು ಹೋಗಿ ಬಾಲಕಿ ಮೇಲೆ ನಿರಂತರ ಅತ್ಯಾಚಾರ ವೆಸಗಿದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ಅತ್ಯಾಚಾರವೆಸಗಿದ ಆರೋಪಿಗೆ 20 ವರ್ಷಗಳ ಕಠಿಣ ಶಿಕ್ಷೆ ಜೊತೆ 62 ಸಾವಿರ ದಂಡವನ್ನು ನ್ಯಾಯಾಲಯ ವಿಧಿಸಿದೆ.

ಮತ್ತೆ ಕರೆದಾಗ ಬಾಲಕಿ ಹೋಗಲು ನಿರಾಕರಿಸಿದಕ್ಕೆ ಆರೋಪಿ ಅರೆನಗ್ನ ವಿಡಿಯೋವನ್ನು ಆಕೆಯ ತಾಯಿಗೆ ಕಳುಹಿಸಿದ್ದಾನೆ.

ಬಾಲಕಿಯ ವಿಡಿಯೋ ತಾಯಿಯ ಮೊಬೈಲ್‌ಗೆ ಕಳುಹಿಸಿ ಲಕ್ಷಾಂತರ ರೂಪಾಯಿ ಬೇಡಿಕೆ ಇಟ್ಟಿದ್ದಾನೆ. ಈ ಬಗ್ಗೆ ನೊಂದ ಬಾಲಕಿಯನ್ನು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಉಡುಪಿ ಜಿಲ್ಲಾ ಫೋಕ್ಸೋ ವಿಶೇಷ ನ್ಯಾಯಾಲಯ ಪ್ರಕರಣವನ್ನು ತನಿಖೆ ಮಾಡಿ ಆರೋಪಿಗೆ ಜೈಲು ಶಿಕ್ಷೆ ವಿಧಿಸಿದೆ.