ಬೆಳಗಾವಿ: ರಾಯಬಾಗ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಪೋಲೀಸ್ ಭರ್ಜರಿ ಬೇಟೆಯಾಡಿದ್ದಾರೆ, ದಾಖಲಾತಿ ಇಲ್ಲದೇ ಸಾಗಾಟ ಮಾಡುತ್ತಿದ್ದ 16 ಲಕ್ಷ ಮೌಲ್ಯದ ಸೀರೆಗಳನ್ನು ವಶಕ್ಕೆ ಪಡೆಯಲಾಗಿದೆ.
ಕೊಲ್ಹಾಪುರ ಮೂಲದ ಖದೀರಬಾಬರ್ ಶೇಖ (60),
ವಸಂತ ಕಾಂಬಳೆ (50) ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.
ಚಿಕ್ಕೋಡಿ- ಸದಲಗಾ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಚೆಕ್ ಪೋಸ್ಟ್ ಅನುಮಾನ್ಪದವಾಗಿ ವಾಹನ ಪರಿಶೀಲನೆ ಮಾಡಿದ್ದಾರೆ. ಬಳಿಕ ದಾಖಲೆ ನೀಡುವಲ್ಲಿ ಚಾಲಕ ಗಾಬರಿಕೊಂಡಿದ್ದಾನೆ. ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
350 ರೂಪಾಯಿ ಬೆಲೆಯುಳ್ಳ 5000 ಸೀರೆ ಹಾಗೂ ವಾಹನ ವಶಕ್ಕೆ ಪಡಿಸಿಕೊಳ್ಳಲಾಗಿದೆ.