ಬೆಳಗಾವಿ ಸುವರ್ಣಸೌಧ ಡಿ.11 : ಪೊಲೀಸ್ ಇಲಾಖೆಯ ಎ.ಎಸ್.ಐ ಮತ್ತು ಸಿಬ್ಬಂದಿಗಳು ಪಿ.ಎಸ್.ಐ ವೃಂದದ ಪತ್ರಾಂಕಿತ ರಜಾ ದಿವಸಗಳಲ್ಲಿ ಕಾರ್ಯನಿರ್ವಹಿಸಿದ್ದಕ್ಕಾಗಿ ಪ್ರಸ್ತುತ ಲಭ್ಯವಿರುವ 15 ದಿವಸಗಳ ವೇತನವನ್ನು 30 ದಿವಸಗಳ ವೇತನಕ್ಕೆ ಪರಿಷ್ಕರಿಸುವ ಪ್ರಸ್ತಾವನೆಯು ಸರ್ಕಾರದ ಹಂತದಲ್ಲಿ ಪರಿಶೀಲನೆಯಲ್ಲಿರುತ್ತದೆ ಎಂದು ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ತಿಳಿಸಿದರು.
ವಿಧಾನ ಪರಿಷತ್ತಿನಲ್ಲಿ ಡಿ.11ರಂದು ಪ್ರಶ್ನೋತ್ತರ ವೇಳೆ ಸದಸ್ಯರಾದ ಡಿ.ಟಿ.ಶ್ರೀನಿವಾಸ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಪ್ರಸ್ತುತ ಕರ್ನಾಟಕ ರಾಜ್ಯ ಮೀಸಲು ಪೆÇಲೀಸ್ ಪಡೆಯ ಕೆಲವು ನಿರ್ದಿಷ್ಟ ವೃಂದದ ಸಿಬ್ಬಂದಿಗಳನ್ನೂ ಒಳಗೊಂಡಂತೆ ಪೊಲೀಸ್ ಇಲಾಖೆಯ ಪೆÇಲೀಸ್ ಕಾನ್ಸ್-ಟೇಬಲ್ ಮತ್ತು ಹೆಡ್ ಕಾನ್ಸ್-ಟೇಬಲ್ ವೃಂದದ ಸಿಬ್ಬಂದಿಗಳಿಗೆ ಅವರು ಪತ್ರಾಂಕಿತ ರಜಾ ದಿವಸಗಳಲ್ಲಿ ಕಾರ್ಯನಿರ್ವಹಿಸಿದ್ದಕ್ಕಾಗಿ 30 ದಿನಗಳ ಹೆಚ್ಚುವರಿ ವೇತನವನ್ನು ಪಾವತಿಸಲು ಅವಕಾಶವಿರುತ್ತದೆ.
ಪೆÇಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ಲಭ್ಯವಿರುವ ಪತ್ರಾಂಕಿತ ರಜಾ ವೇತನದ ಸೌಲಭ್ಯವೂ ಸೇರಿದಂತೆ ಸರ್ಕಾರಿ ನೌಕರರ ವಿಶೇಷ ಭತ್ಯೆಯ ಪರಿಷ್ಕರಣೆಯು ಸರ್ಕಾರದ ನೀತಿ ನಿರ್ಣಯಕ್ಕೆ ಸಂಬಂಧಿಸಿರುತ್ತದೆ ಎಂದು ಗೃಹ ಸಚಿವರು ವಿವರಿಸಿದರು.



























