ಹಿಡಕಲ್ ಡ್ಯಾಂ:-ರಾಜಾಲಖಮಗೌಡ ಜಲಾಶಯದ ಹಿನ್ನೀರಿನ ಪ್ರದೇಶದವಾದ ಹುನ್ನೂರು ಗ್ರಾಮದ ಬಳಿ ಶ್ರೀ ವಿಠ್ಠಲ ದೇವಸ್ಥಾನವಿದ್ದು ಈ ದೇವಸ್ಥಾನವು ಹಿಡಕಲ್ ಜಲಾಶಯಕ್ಕೆ ಆಜರಾ ಚಂದಗಡ ಸೇರಿದಂತೆ ಪಶ್ಚಿಮ ಘಟ್ಟಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದರೆ ಘಟಪ್ರಭಾ ನದಿಯ ಒಡಲು ತುಂಬಿ ಹರಿಯುವಾಗ ಮುಂದೆ ಹಿಡಕಲ್ ಜಲಾಯವಿದ್ದ ಕಾರಣ ಶ್ರೀ ವಿಠ್ಠಲ ಮಂದಿರಕ್ಕೆ ಸಹಜವಾಗಿ ನೀರು ಬರುತ್ತದೆ ಈ ದೇವಸ್ಥಾನ ಮಳೆಗಾಲ ಪ್ರಾರಂಭಗೊAಡಾಗ ಕೆಲ ದಿನಗಳ ನಂತರ ಜಲಾಶಯದ ಹಿನ್ನಿರು ಆವರಿಸಿ ಜಲಾವೃತಗೊಳ್ಳುತ್ತದೆ ಪ್ರತಿ ವರ್ಷ ೭ ರಿಂದ ೮ ತಿಂಗಳುಗಳವರೆಗೆ ನೀರಿನಲ್ಲಿ ಮುಳುಗಿರುತ್ತದೆ. ಕೇವಲ ೪ ತಿಂಗಳ ಕಾಲ ಮಾತ್ರ ಈ ದೇವಸ್ಥಾನವು ತೆರದಿರುತ್ತದೆ, ಈ ಬಾರಿ ಬೆಳಗಾವಿ ಜಿಲ್ಲೆಯ ವಿವಿಧ ಭಾಗಗಳಿಂದ ಈ ದೇವಸ್ಥಾನ ನೋಡಲು ಸಾವಿರಾರು ಜನ ಬಂದು ಹೋಗಿದ್ದಾರೆ. ದೇವಸ್ಥಾನವು ವಿಶಿಷ್ಠ ಶಿಲ್ಪಕಲೆಗಳಿಂದ ಕೂಡಿದ್ದು, ನೋಡಲು ತುಂಬಾ ಆಕರ್ಷಣೀಯವಾಗಿದೆ ಈ ದೇವಸ್ಥಾನ ಮಾದರಿಯಲ್ಲಿಯೇ ಈಗಿನ ಹುನ್ನೂರ ಗ್ರಾಮದಲ್ಲಿ ಅದ್ಭುತ ಕಲಾಕೃತಿಗಳಿಂದ ಶ್ರೀ ವಿಠ್ಠಲ ದೇವರ ಹೊಸ ದೇವಸ್ಥಾನವನ್ನು ನಿರ್ಮಿಸಿದ್ದಾರೆ. ಇದು ಹುಕ್ಕೇರಿ ತಾಲೂಕಿನಲ್ಲಿ ಶ್ರೇಷ್ಟವಾದ ದೇವಸ್ಥಾನ ಎಂದೆನಿಸಿಕೊAಡಿದೆ. ಪಶ್ಚಿಮ ಘಟ್ಟಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದರಿಂದ ಹಿಡಕಲ್ ಜಲಾಶಯದಲ್ಲಿ ೧೩೭೫೦ ಕ್ಯೂಸೆಕ್ಸ್ ಏರಿಕೆಯಾಗಿದೆ, ಕಳೆದ ಸಲ ೨೩೪೬೫ ಕ್ಯೂಸೆಕ್ಸ ನೀರು ಹರಿದು ಬಂದಿತ್ತು.